ಇರಾನ್,, ಅಧಿಕೃತವಾಗಿ ಇರಾನ್ ಇಸ್ಲಾಮಿ ಗಣರಾಜ್ಯ, ಮುಂಚೆ ಪರ್ಷಿಯ ಎಂದು ಕರೆಯಲ್ಪಡುತ್ತಿದ್ದ ಪಶ್ಚಿಮ ಏಷ್ಯಾ ದೇಶ. ಕ್ರಿ.ಪೂ. 2500ಕ್ಕೂ ಹಿಂದಿನ ಇತಿಹಾಸ ಪಡೆದಿರುವ ಈ ದೇಶ 1935ರಿಂದೀಚೆಗೆ ಇರಾನ್ ಎಂಬ ಹೆಸರನ್ನು ಅಧಿಕೃತವಾಗಿ ತಳೆದಿದೆ. ಇದು ಪ್ರಪಂಚದ ೧೮ನೇ ದೊಡ್ಡ ರಾಷ್ಟ್ರವಾಗಿದ್ದು ಸುಮಾರು ೭೦ …ಇರಾನ್,, ಅಧಿಕೃತವಾಗಿ ಇರಾನ್ ಇಸ್ಲಾಮಿ ಗಣರಾಜ್ಯ, ಮುಂಚೆ ಪರ್ಷಿಯ ಎಂದು ಕರೆಯಲ್ಪಡುತ್ತಿದ್ದ ಪಶ್ಚಿಮ ಏಷ್ಯಾ ದೇಶ. ಕ್ರಿ.ಪೂ. 2500ಕ್ಕೂ ಹಿಂದಿನ ಇತಿಹಾಸ ಪಡೆದಿರುವ ಈ ದೇಶ 1935ರಿಂದೀಚೆಗೆ ಇರಾನ್ ಎಂಬ ಹೆಸರನ್ನು ಅಧಿಕೃತವಾಗಿ ತಳೆದಿದೆ. ಇದು ಪ್ರಪಂಚದ ೧೮ನೇ ದೊಡ್ಡ ರಾಷ್ಟ್ರವಾಗಿದ್ದು ಸುಮಾರು ೭೦ ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಉತ್ತರಕ್ಕೆ ಅರ್ಮೇನಿಯ, ಅಜರ್‍ಬೈಜಾನ್ ಮತ್ತು ತುರ್ಕ್‍ಮೇನಿಸ್ಥಾನ್, ಪೂರ್ವಕ್ಕೆ ಅಫ್ಘಾನಿಸ್ಥಾನ ಮತ್ತು ಪಾಕಿಸ್ಥಾನ, ಮತ್ತು ಪಶ್ಚಿಮಕ್ಕೆ ಟರ್ಕಿ ಮತ್ತು ಇರಾಕ್‌ಗಳೊಂದಿಗೆ ಸೀಮೆಯನ್ನು ಹೊಂದಿದೆ. ಅಲ್ಲದೆ ಪರ್ಷಿಯನ್ ಕೊಲ್ಲಿ ಮತ್ತು ಕ್ಯಾಸ್ಪಿಯನ್ ಸಮುದ್ರಗಳ ತಟಗಳನ್ನೂ ಹೊಂದಿದೆ. ಶಿಯ ಇಸ್ಲಾಮ್ ಇರಾನ್‍ನ ಅಧಿಕೃತ ಧರ್ಮ ಮತ್ತು ಪರ್ಷಿಯನ್ ಭಾಷೆ ಅಧಿಕೃತ ಭಾಷೆ.